Sunday, August 14, 2011

ಕದ ಕದವ ತಟ್ಟಿ..



ಕದ ಕದವ ತಟ್ಟಿ..
ಮನೆ ಮನವ ಮುಟ್ಟಿ..
ಜನ ಮನದಿ ಭಿತ್ತಿ ..
ದೇಶ ಭಕ್ತಿ, ದೇಶ ಭಕ್ತಿ,
ಜೈ ಹಿಂದ್, ಜೈ ಹಿಂದ್...

ರಕ್ತ ರಕ್ತದಲಿ ..
ಜೀವ ಜೀವದಲಿ ...
ಸ್ರಷ್ಟಿ ..ಸ್ರಷ್ಟಿಯಲಿ
ಆಚಾರದಾ ..ವಿಚಾರ ತುಂಬಿದ ..
ಆ ಋಷಿಗಳಿಗೆ ...
ಜೈ ಹಿಂದ್..ಜೈ ಹಿಂದ್

ಪರರ ನೆರಳಿಂದ ..
ಭಯದ ..ಭೂವಿಯಿಂದ..
ಮುಕ್ತಗೊಳಿಸಿದ ..
ಬೇಡಿ ಬಿಡಿಸಿದ ..
ಆ ವೀರರಿಗೆ, ಹುತಾತ್ಮರಿಗೆ ...
ಜೈ ಹಿಂದ್..ಜೈ ಹಿಂದ್ ...

ಬಿಸಿಲು ಮಳೆಯಲ್ಲಿ ..
ಹಗಲು ಇರುಳಲ್ಲಿ ...
ಮಂಜು ಮರಳಲ್ಲಿ ...
ಈ ದೇಶ ಕಾಯೋ
ಆ ಯೋಧರಿಗೆ ...ಆ ದೇವರಿಗೆ ...
ಜೈ ಹಿಂದ್.. ಜೈ ಹಿಂದ್...

ಈ ವೀರ ಭೂಮಿಗೆ ಜೈವಾಗಲಿ

ಮರುಭೂಮಿಯಂತಾಗಿತ್ತು ...
ಪೂಣ್ಯ ಭೂಮಿಯು ..
ಕಾದು ಸುಡುತ್ತಿತ್ತು ..
ಈ ಮುಗ್ಧ ಜನರನ್ನು ಹಬೆಯು ...

ಹಾರಿಸಿ ಹೊತೊಯ್ಧಿತ್ತು ದೂರ ...
ಇವರ ಜ್ಞಾನವ, ಸುಂಟರ ಗಾಳಿ ..
ಶಕ್ತಿಯಿಲ್ಲದೆ, ಸುಮನ್ನೇ ಕುಳಿತರು ...
ನಡೆಯುತ್ತಿತ್ತು ..ಅಂಗ ಅಂಗದ ಮೇಲೆ ..
ದಗೆಯ ಬಂಟರ್ ದಾಳಿ ..

ಕಿತ್ತು ತಿನ್ನುತ್ತಿತ್ತು ಬರಗಲಾ ..
ಇದ್ದ ಒಂದಿಸ್ಟನ್ನು ಹೊತೊಯ್ದರು ..
ಕೊಟ್ಟವರು ಸಾಲ ...
ಹೇರುತ್ತಿದ್ದರು..ನಾನಾ ರೀತಿಯ ಸುಂಕ ..
ತುಂಬಲಾರದೆ ಶರಣಾಗುತ್ತಿದ್ದರು ...
ಸಾವಿಗೆ , ಇದು ಅವರಾ ಮಂಕಾ ...

ದಗೆ ಹೆಚ್ಚಿತು , ಪಾಪ ಪುಣ್ಯವಿಲ್ಲದೆ ..
ನಡೆಯಿತು ..ಅತ್ಯಾಚಾರ ...
ಯಾರು ಹೇಳೋಕೆ ಹೋಗಲ್ಲಿಲ್ಲ ಅವಕೆ ಆಚಾರಾ ..
ಮಿತಿಮೀರಿ ಸುಡುತ್ತಿತ್ತು ..ಹಬೆ ...
ಆಗ ಸಹನೆ ಸ್ಪೋಟಿಸಿತು..
ದಂಗೆಎದ್ದಿತು ...
ಕ್ರಾಂತಿಯ ಗಿಡವ ನೆಟ್ಟಿತು ...
ನೆತ್ತರನೆ ನೀರಾಗಿ ಹರಿಸಿತು ...
ದೇಹವನೆ ಕಡಿದು ಗೊಬ್ಬರ ಮಾಡಿ ಬೆಳೆಸಿತು ...

ದಗೆಗೆ ದಂಗೆಯ ತಂಪು ತಟ್ಟಿತು ...
ಅರ್ಭಟವೆಲ್ಲಾ ..ಅಡಗಿ ಹೋಯಿತು ...
ಮರುಭೂಮಿ ..ವೀರಭೂಮಿ ಆಯಿತು ...
ಪಾವನಗೊಂಡಿತು, ಭೂವಿಯ ..
ಸುತರ ನೆತ್ತರಿನ ಹೊಳೆಯಿಂದ ...

ಹಸಿರು ಯಲ್ಲೆಡೆ ತುಂಬಿತು ...
ಬರಗಾಲ ದೂರವಾಯಿತು ...
ಮರಳು ಮಣ್ಣಾಯಿತು ...
ದಗೆ ದೂರ ಸರಿಯಿತು ...
ಸ್ವತಂತ್ರವಾಯಿತು ...
ಈ ವೀರ ಭೂಮಿ ಸರ್ವ ಸ್ವತಂತ್ರ್ಯವಾಯಿತು ...

ಸೈನಿಕ ..






ಸೈನಿಕ ..



ಮಂಜು ಮುಸುಕಿದಾ ..ಬಾನಿನಲಿ ..

ಹ್ರದಯಘಾತ ವಾಗುವಂತಹ ಕೊರೆಯುವ ಚಳಿಯಲ್ಲಿ ...

ಬಾನೆತ್ತರಕ್ಕೆ ಬೆಳೆದು ನಿಂತ ಬೆಟ್ಟಗಳನು..

ಹೊರಲಾರದ ಹೊರೆಯ ಹೊತ್ತು ...

ಕಣ್ಣ ರೆಪ್ಪೆ ಹೊಡೆಯೋದರೊಳಗೆ...

ಚಾಟ್ ಪಟ್ ಗುಡಿಸದೇ ..ಪಟ ಪಟನೆ ಹತ್ತಿ ..

ಸತ್ ಸತ್ ನೆ ಶತ್ರುಗಳ ಸದೆ ಬಡಿದು ...

ಮಾತೆಯ ಗೌರವ ರಕ್ಷಣೆ ಮಾಡುವ ...

ಈ ನಮ್ಮ ದೇವರಿಗೆ ನಮ್ಮೆಲ್ಲರ ..

ಕೋಟಿ ಕೋಟಿ ನಮನವಿರಲಿ ...

Tuesday, August 9, 2011

ಪ್ಯಾಟೆ ಮಾಣಿ | ಹಳ್ಳಿ ಮಾತು: ಶಿಬ್ಲು ..

ಪ್ಯಾಟೆ ಮಾಣಿ ಹಳ್ಳಿ ಮಾತು: ಶಿಬ್ಲು ..: "ಯಾರ ಬೇಡ ಬೇಡ ಅಂದ್ರು ೬ ಘಂಟೆಗೆ, ಯದ್ದು ಬಿಡ್ತಿದ್ವಪಾ ...ನಂಗೆ ಕಲ್ಸಿದು ಅಜ್ಜಿ..
ಯದ್ದು ಶಿಬ್ಲು( ಹೂ ಕೊಯೋ ಬುಟ್ಟಿ) ಹಿಡಿದು ತೋಟಕ್ಕೆ ..."

ಮೋತಿ ಮಲ್ಲಿಗೆ ಅಂತಾ ಒಂದು ಚಿಕ್ಕ ಹೂ..
ಯಸ್ಟು ಕೊಯ್ದರು ..ಖಾಲಿ ಆಗ್ತಿರಲಿಲ್ಲಾ..ಹಾಂಗಂತ ಕೊಯೋಕು ಆಗ್ತಿರ್ಲಿಲ್ಲ ..
ಸೊಳ್ಳೆ ಕಚ್ತಿತ್ತು ..ಮತ್ತೆ ..ಸಾವ್ರಗಟ್ಲೆ ಹೂ ಆಗದು ...

ಹೆಂಗಸರಿಗೆ ಮಾಲೆ ಮಾಡೋಕೆ ಬಹಳ ಒಳ್ಳೆ ಹೂ ಅದು..
ಸಂಜೆ ಮೊಗ್ಗು ಕೊಯಿದು ...ಮಾಲೆ ಮಾಡೋಕೆ ಕೂತರು ಅಂದ್ರೆ ...
ನಾಲಕ್ಕು ನಾಲ್ಕು ...ಧಾರವಾಹಿ ಮುಗಿದು ಹೋಗದು ...