ಮರುಭೂಮಿಯಂತಾಗಿತ್ತು ...
ಪೂಣ್ಯ ಭೂಮಿಯು ..
ಕಾದು ಸುಡುತ್ತಿತ್ತು ..
ಈ ಮುಗ್ಧ ಜನರನ್ನು ಹಬೆಯು ...
ಹಾರಿಸಿ ಹೊತೊಯ್ಧಿತ್ತು ದೂರ ...
ಇವರ ಜ್ಞಾನವ, ಸುಂಟರ ಗಾಳಿ ..
ಶಕ್ತಿಯಿಲ್ಲದೆ, ಸುಮನ್ನೇ ಕುಳಿತರು ...
ನಡೆಯುತ್ತಿತ್ತು ..ಅಂಗ ಅಂಗದ ಮೇಲೆ ..
ದಗೆಯ ಬಂಟರ್ ದಾಳಿ ..
ಕಿತ್ತು ತಿನ್ನುತ್ತಿತ್ತು ಬರಗಲಾ ..
ಇದ್ದ ಒಂದಿಸ್ಟನ್ನು ಹೊತೊಯ್ದರು ..
ಕೊಟ್ಟವರು ಸಾಲ ...
ಹೇರುತ್ತಿದ್ದರು..ನಾನಾ ರೀತಿಯ ಸುಂಕ ..
ತುಂಬಲಾರದೆ ಶರಣಾಗುತ್ತಿದ್ದರು ...
ಸಾವಿಗೆ , ಇದು ಅವರಾ ಮಂಕಾ ...
ದಗೆ ಹೆಚ್ಚಿತು , ಪಾಪ ಪುಣ್ಯವಿಲ್ಲದೆ ..
ನಡೆಯಿತು ..ಅತ್ಯಾಚಾರ ...
ಯಾರು ಹೇಳೋಕೆ ಹೋಗಲ್ಲಿಲ್ಲ ಅವಕೆ ಆಚಾರಾ ..
ಮಿತಿಮೀರಿ ಸುಡುತ್ತಿತ್ತು ..ಹಬೆ ...
ಆಗ ಸಹನೆ ಸ್ಪೋಟಿಸಿತು..
ದಂಗೆಎದ್ದಿತು ...
ಕ್ರಾಂತಿಯ ಗಿಡವ ನೆಟ್ಟಿತು ...
ನೆತ್ತರನೆ ನೀರಾಗಿ ಹರಿಸಿತು ...
ದೇಹವನೆ ಕಡಿದು ಗೊಬ್ಬರ ಮಾಡಿ ಬೆಳೆಸಿತು ...
ದಗೆಗೆ ದಂಗೆಯ ತಂಪು ತಟ್ಟಿತು ...
ಅರ್ಭಟವೆಲ್ಲಾ ..ಅಡಗಿ ಹೋಯಿತು ...
ಮರುಭೂಮಿ ..ವೀರಭೂಮಿ ಆಯಿತು ...
ಪಾವನಗೊಂಡಿತು, ಭೂವಿಯ ..
ಸುತರ ನೆತ್ತರಿನ ಹೊಳೆಯಿಂದ ...
ಹಸಿರು ಯಲ್ಲೆಡೆ ತುಂಬಿತು ...
ಬರಗಾಲ ದೂರವಾಯಿತು ...
ಮರಳು ಮಣ್ಣಾಯಿತು ...
ದಗೆ ದೂರ ಸರಿಯಿತು ...
ಸ್ವತಂತ್ರವಾಯಿತು ...
ಈ ವೀರ ಭೂಮಿ ಸರ್ವ ಸ್ವತಂತ್ರ್ಯವಾಯಿತು ...
No comments:
Post a Comment