Sunday, August 14, 2011

ಕದ ಕದವ ತಟ್ಟಿ..



ಕದ ಕದವ ತಟ್ಟಿ..
ಮನೆ ಮನವ ಮುಟ್ಟಿ..
ಜನ ಮನದಿ ಭಿತ್ತಿ ..
ದೇಶ ಭಕ್ತಿ, ದೇಶ ಭಕ್ತಿ,
ಜೈ ಹಿಂದ್, ಜೈ ಹಿಂದ್...

ರಕ್ತ ರಕ್ತದಲಿ ..
ಜೀವ ಜೀವದಲಿ ...
ಸ್ರಷ್ಟಿ ..ಸ್ರಷ್ಟಿಯಲಿ
ಆಚಾರದಾ ..ವಿಚಾರ ತುಂಬಿದ ..
ಆ ಋಷಿಗಳಿಗೆ ...
ಜೈ ಹಿಂದ್..ಜೈ ಹಿಂದ್

ಪರರ ನೆರಳಿಂದ ..
ಭಯದ ..ಭೂವಿಯಿಂದ..
ಮುಕ್ತಗೊಳಿಸಿದ ..
ಬೇಡಿ ಬಿಡಿಸಿದ ..
ಆ ವೀರರಿಗೆ, ಹುತಾತ್ಮರಿಗೆ ...
ಜೈ ಹಿಂದ್..ಜೈ ಹಿಂದ್ ...

ಬಿಸಿಲು ಮಳೆಯಲ್ಲಿ ..
ಹಗಲು ಇರುಳಲ್ಲಿ ...
ಮಂಜು ಮರಳಲ್ಲಿ ...
ಈ ದೇಶ ಕಾಯೋ
ಆ ಯೋಧರಿಗೆ ...ಆ ದೇವರಿಗೆ ...
ಜೈ ಹಿಂದ್.. ಜೈ ಹಿಂದ್...

1 comment:

  1. ಸೊಗಸಾಗಿದೆ ನಿಮ್ಮ ಕವಿತೆ ...ಜೈ ಹಿಂದ್..

    ReplyDelete